ಜೆಕೆ ಮತ್ತು ಅನುಪಮಾ ಅವರ 'ಕರಾಳ ರಾತ್ರಿ'ಗೆ ದಯಾಳ್ ಸಾಕ್ಷಿ! | Filmibeat Kannada

Filmibeat Kannada 2017-12-05

Views 2K

'ಬಿಗ್ ಬಾಸ್' ಗಲಾಟೆ, ವಿವಾದಗಳ ಕೇಂದ್ರ ಬಿಂದು ಆಗಿದ್ದ ನಿರ್ದೇಶಕ ದಯಾಳ್ ಪದ್ಮನಾಭನ್ ಮೂರು ವಾರಕ್ಕೆ ಔಟ್ ಆಗಿದ್ದರು. ಆದರೆ ಬಿಗ್ ಮನೆಯಿಂದ ಹೊರ ಬಂದಿರುವ ಮೇಲೆ ನಿರ್ದೇಶಕ ದಯಾಳ್ ಈಗ ಒಂದು ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ. ಅಲ್ಲದೇ ಈ ಚಿತ್ರಕ್ಕೆ ತಮ್ಮ ಜೊತೆ 'ಬಿಗ್ ಬಾಸ್' ಮನೆಯಲ್ಲಿ ಇದ್ದ ಜೆಕೆ ಮತ್ತು ಅನುಪಮಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ದಯಾಳ್ 'ಬಿಗ್ ಬಾಸ್' ಮನೆಗೆ ಹೋದ ಸಮಯಕ್ಕೆ ಸರಿಯಾಗಿ ಅವರೇ ನಿರ್ದೇಶನದ 'ಸತ್ಯ ಹರಿಶ್ಚಂದ್ರ' ಸಿನಿಮಾ ರಿಲೀಸ್ ಆಗಿತ್ತು. ಶರಣ್ ಇರುವ ಕಾರಣ ಕಾಮಿಡಿ ಇರಬಹುದು ಎಂದು ನಿರೀಕ್ಷೆ ಇದ್ದ ಈ ಸಿನಿಮಾ ಚಿತ್ರಮಂದಿರದಲ್ಲಿ ಹೆಚ್ಚು ದಿನ ಇರಲಿಲ್ಲ. ಈಗ ಆ ಸಿನಿಮಾದ ನಂತರ ಮತ್ತೆ ದಯಾಳ್ ಹೊಸ ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರೆ. ಅಲ್ಲದೇ 'ಬಿಗ್ ಬಾಸ್'ನಲ್ಲಿ ತಮಗೆ ಆಪ್ತರಾಗಿದ್ದ ಜೆಕೆ ಮತ್ತು ಅನುಪಮ ಅವರೇ ಸೂಕ್ತ ಎಂದು ನಿರ್ಧಾರ ಮಾಡಿದ್ದಾರೆ. ದಯಾಳ್ ಇದೀಗ 'ಡಾರ್ಕ್ ನೈಟ್' ಎಂಬ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಇದ್ದ ವೇಳೆಯೇ ಅನುಪಮ ಮತ್ತು ಜೆಕೆ ಬಳಿ ದಯಾಳ್ ಮಾತನಾಡಿದ್ದಾರಂತೆ.
Bigg Boss Kannada 5: Week 8:big boss is one of the big reality show in colors kannada.'Bigg Boss Kannada 5' Eliminated Contestant director Dayal Padmanabhan will directing a movie to Karthik Jayaram and Anupama Gowda.

Share This Video


Download

  
Report form
RELATED VIDEOS