ದಿ ವಿಲನ್ ಸಿನಿಮಾದ ಟೀಸರ್ ಇದೇ ವಾರದಲ್ಲಿ ರಿಲೀಸ್ | Filmibeat Kannada

Filmibeat Kannada 2017-12-05

Views 1.3K

ಅಭಿಮಾನಿಗಳಿಗೆ 'ದಿ ವಿಲನ್' ಚಿತ್ರತಂಡದಿಂದ ಸಿಹಿ ಸುದ್ದಿ. ಸೆಟ್ಟೇರೋ ಮುಂಚಿನಿಂದಲೂ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿರೋ ಏಕೈಕ ಸಿನಿಮಾ 'ದಿ ವಿಲನ್'. ಇಬ್ಬರು ಸ್ಟಾರ್ ನಟರ ಅಭಿಮಾನಿಗಳಿಗೆ ಹಂತ ಹಂತವಾಗಿ ಸರ್ ಪ್ರೈಸ್ ನೀಡುತ್ತಾ ಬರುತ್ತಿರುವ ನಿರ್ದೇಶಕ ಜೋಗಿ ಪ್ರೇಮ್ ಅಭಿಮಾನಿಗಳಿಗೆ ಹಬ್ಬ ಮಾಡಲು ತಯಾರಿ ಮಾಡಿಕೊಳ್ಳಿ ಎಂದು ಸೂಚನೆ ನೀಡಿದ್ದಾರೆ. ಅದ್ದೂರಿಯಾಗಿ ಟೈಟಲ್ ಲಾಂಚ್ ಮಾಡಿ ಫಸ್ಟ್ ಲುಕ್ ಬಿಡುಗಡೆ ಮಾಡಿದ ಪ್ರೇಮ್ ಅಭಿಮಾಗಳಿಗಾಗಿ ಭರ್ಜರಿ ಗಿಫ್ಟ್ ರೆಡಿ ಮಾಡಿದ್ದಾರೆ. ಚಿತ್ರೀಕರಣದ ಪ್ರತಿ ಹಂತದ ಅಪ್ಡೇಟ್ ಗಳನ್ನೂ ಅಭಿಮಾನಿಗಳಿಗೆ ಮೊದಲಿನಿಂದಲೂ ತಿಳಿಸುತ್ತಾ ಬರುತ್ತಿರುವ 'ದಿ ವಿಲನ್' ಚಿತ್ರತಂಡ ಈ ಬಾರಿಯೂ ಸಂತಸದ ಸುದ್ದಿಯನ್ನ ಅಭಿಮಾನಿಗಳಿಗೆ ಮೊದಲು ತಿಳಿಸಿದೆ. ಇದೇ ವಾರದಲ್ಲಿ 'ದಿ ವಿಲನ್' ಸಿನಿಮಾದ ಟೀಸರ್ ಬಿಡುಗಡೆಗೆ ಸಿದ್ದತೆ ನಡೆದಿದ್ದು, ಪ್ರೇಮ್ ತಮ್ಮ ಟ್ವಿಟ್ಟರ್ ಮೂಲಕ ಈ ವಿಚಾರವನ್ನ ಹಂಚಿಕೊಂಡಿದ್ದಾರೆ.

The Villain movie Teaser of Shiva Rajkumar and Sudeep will be out this week. Director Prem all set to release two separate teasers & the same is confirmed through Twitter.

Share This Video


Download

  
Report form
RELATED VIDEOS