ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿರುವಾಗಲೇ ಅವರ ಮುಂದಿನ ಚಿತ್ರಗಳ ಬಗ್ಗೆ ಬಾರೀ ಕುತೂಹಲಗಳು ಹುಟ್ಟುಕೊಂಡಿದೆ. 'ಕುರುಕ್ಷೇತ್ರ' ಸಿನಿಮಾದ ನಂತರ 'ಡಿ ಬಾಸ್' ಶೈಲಾಜ ನಾಗ್ ನಿರ್ಮಾಣದ ಚಿತ್ರದಲ್ಲಿ ಆಕ್ಟ್ ಮಾಡಲಿದ್ದಾರೆ ಅನ್ನೋದನ್ನ ಸ್ವತಃ ನಿರ್ಮಾಪಕರೇ ಕನ್ಫರ್ಮ್ ಮಾಡಿದ್ದಾರೆ. ದರ್ಶನ್ ಅಭಿನಯದ 51 ನೇ ಸಿನಿಮಾಗೆ ತಯಾರಿಗಳು ಪ್ರಾರಂಭವಾಗಿದ್ದು ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿ ನಿರ್ದೇಶಕ 'ಪಿ ಕುಮಾರ್' ತೊಡಗಿಕೊಂಡಿದ್ದಾರೆ. 51 ನೇ ಚಿತ್ರ ಸೆಟ್ಟೇರುವ ಮುಂಚೆಯೇ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ಅಭಿನಯಿಸೋದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.ನಿರ್ದೇಶನಕ ಪ್ರೇಮ್ ಗಾಗಿ 85 ದಿನಗಳ ಕಾಲ್ ಶೀಟ್ ನೀಡಿದ್ದಾರೆ ದರ್ಶನ್ ಅನ್ನುವ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿಬರುತ್ತಿದೆ. ಇವುಗಳ ಮಧ್ಯೆ ಹೊಸ ವಿಷ್ಯ ಅಂದರೆ ನಿರ್ದೇಶಕ ಪ್ರೇಮ್, ದಾಸನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲು ಬಾರಿ ಮೊತ್ತದ ಸಂಭಾವನೆಯನ್ನ ಪಡೆದಿದ್ದಾರಂತೆ. ಹಾಗಾದ್ರೆ ಪ್ರೇಮ್ ಪಡೆದಿರೋ ಸಂಭಾವನೆ ಎಷ್ಟು? ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿಜಕ್ಕೂ ಅಷ್ಟು ಹಣ ನೀಡೋದಕ್ಕೆ ಒಪ್ಪಿಗೆ ನೀಡಿದ್ದಾರಾ?
Kannada Director Jogi Prem earns 2 crores call sheet money to direct Challenging star Darshan's next movie. kannada 'Hebbuli' movie fame Umapathy Srinivas is producing the film. the movie will be start next year (2018).