ದಿವಾಕರ್ ವೈನ್ ಗಾಗಿ ಬಿಗ್ ಬಾಸ್ ಬಳಿ ಮನವಿ | Filmibeat Kannada

Filmibeat Kannada 2018-01-02

Views 1.2K

Bigg Boss Kannada 5: Week 11: New Year celebration at Bigg House was a blast. Here in a secret room, Diwakar requests Bigg Boss to give Vine for New Year Celebration.


'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಆರಂಭದ ದಿನಗಳಲ್ಲಿ ಇದ್ದಂತೆ ದಿವಾಕರ್ ಈಗಿಲ್ಲ. ಅಂದು ಕಾಮನ್ ಮ್ಯಾನ್ ದಿವಾಕರ್ ನ ಜನ ಇಷ್ಟ ಪಡುತ್ತಿದ್ದರು. ಪದೇ ಪದೇ ನಾಮಿನೇಟ್ ಆಗುತ್ತಿದ್ದ ದಿವಾಕರ್, ವೀಕ್ಷಕರ ಬೆಂಬಲದಿಂದ ಸೇಫ್ ಆಗುತ್ತಿದ್ದರು.ಸೇಫ್ ಆಗುತ್ತಾ ಬಂದಂತೆ ದಿವಾಕರ್ ರವರಲ್ಲಿ ಆತ್ಮ ವಿಶ್ವಾಸ ಹೆಚ್ಚಾಯ್ತಾ.? ಗೊತ್ತಿಲ್ಲ. ಆದ್ರೆ, ಅನೇಕ ಬಾರಿ ಜಗಳಕ್ಕೆ ನಾಂದಿ ಹಾಡಿದರು. ಅನವಶ್ಯಕವಾಗಿ ರಿಯಾಝ್ ಜೊತೆ ಯುದ್ಧಕ್ಕೆ ಇಳಿದರು. ನಿವೇದಿತಾ ಜೊತೆ ವಾದ ಮಾಡಿದರು. ಜಯಶ್ರೀನಿವಾಸನ್ ಜೊತೆ ವಾಕ್ಸಮರ ನಡೆಸಿದರು. ''ಹೇರ್ ಸ್ಟೈಲ್ ಬದಲಾದಂತೆ ದಿವಾಕರ್ ಬುದ್ಧಿ ಕೂಡ ಬದಲಾಗಿದೆ'' ಎಂಬ ಮಾತು ಸುದೀಪ್ ಬಾಯಿಂದ ಕೂಡ ಬಂದಿತ್ತು.‘ಬಿಗ್ ಬಾಸ್’ ಮನೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿತ್ತು. ಈ ವಾರ ಕ್ಯಾಪ್ಟನ್ ಆಗಿ ಸಮೀರಾಚಾರ್ಯ ಆಯ್ಕೆಯಾಗಿದ್ದು, ಸೀಕ್ರೆಟ್ ರೂಂನಲ್ಲಿರುವ ದಿವಾಕರ್ ವೈನ್ ಕೇಳಿದ್ದಾರೆ.ಸೀಕ್ರೆಟ್ ರೂಂನಲ್ಲಿ ದಿವಾಕರ್, ಯಾರಿಗೂ ಹೇಳಲ್ಲ ‘ಬಿಗ್ ಬಾಸ್,’ ಚಿಕ್ಕ ಬಾಟಲ್ ವೈನ್ ಕೊಡಿ. ನೀವು ಲೈಟ್ ಆಫ್ ಮಾಡಿದಾಗ ಕೊಡಿ. ಹ್ಯಾಪಿ ನ್ಯೂ ಇಯರ್ ಒಬ್ಬನೇ ಸೆಲೆಬ್ರೇಷನ್ ಮಾಡ್ತೀನಿ. ಊಟ ಮಾಡಿ ಮಲಗುತ್ತೇನೆ. ಯಾರಿಗೂ ಹೇಳಲ್ಲ ಎಂದು ಹೇಳಿದ್ದಾರೆ.

Share This Video


Download

  
Report form
RELATED VIDEOS