ಬಿಗ್ ಬಾಸ್ ಕನ್ನಡ ಸೀಸನ್ 5 : ದಿವಾಕರ್ ನ ಕಂಡ್ರೆ ಅನುಪಮಾಗೆ ಆಗಲ್ವಾ? | Filmibeat Kannada

Filmibeat Kannada 2018-01-09

Views 1.1K

Bigg Boss Kannada 5: Week 13: Anupama Gowda becomes captain for the second time. Anupama Gowda's strategic play made her captain again


'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಮೊದಲನೇ ವಾರದ ಕ್ಯಾಪ್ಟನ್ ಆಗಿದ್ದೇ ನಟಿ ಅನುಪಮಾ ಗೌಡ. ಹದಿಮೂರು ವಾರಗಳಲ್ಲಿ ರಿಯಾಝ್ ಮತ್ತು ಸಮೀರಾಚಾರ್ಯ ಮಾತ್ರ ಎರಡು ಬಾರಿ ಕ್ಯಾಪ್ಟನ್ ಆಗಿದ್ದಾರೆ. ಸದ್ಯ 'ಬಿಗ್ ಬಾಸ್' ಮನೆಯಲ್ಲಿ ಇರುವ ಎಂಟು ಸದಸ್ಯರ ಪೈಕಿ ದಿವಾಕರ್ ಮಾತ್ರ ಇನ್ನೂ ಒಮ್ಮೆ ಕೂಡ ಕ್ಯಾಪ್ಟನ್ ಆಗಿಲ್ಲ.ಈ ವಾರ ದಿವಾಕರ್ ಕ್ಯಾಪ್ಟನ್ ಆಗುವ ಸಾಧ್ಯತೆ ಇತ್ತು. ಆದ್ರೆ, ಅದಕ್ಕೆ ನಟಿ ಅನುಪಮಾ ಗೌಡ ಕಲ್ಲು ಹಾಕಿದರು.ದಿವಾಕರ್ ಅವರನ್ನ ಕ್ಯಾಪ್ಟನ್ ಮಾಡಲು ಚಂದನ್ ಶೆಟ್ಟಿ ಹಾಗೂ ಶ್ರುತಿ ಪ್ರಕಾಶ್ ಮನಸ್ಸು ಮಾಡಿದ್ದರು. ಆದ್ರೆ, ಶ್ರುತಿ ಪ್ರಕಾಶ್ ತಲೆ ಕೆಡಿಸಿ ಅನುಪಮಾ ಗೌಡ ಕ್ಯಾಪ್ಟನ್ ಪಟ್ಟಕ್ಕೆ ಏರಿದರು. ಅಷ್ಟಕ್ಕೂ, ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದ್ದು ಏನು.? ಬಲೂನ್ ಗಳನ್ನು ಒಡೆದು ಆರು ವ್ಯಾಸಲೀನ್ ಚೀಟಿಗಳನ್ನು ಹುಡುಕುವ ಟಾಸ್ಕ್ ನ 'ಬಿಗ್ ಬಾಸ್' ನೀಡಿದ್ದರು. ಯಾರ ಬಳಿ ಅತಿ ಹೆಚ್ಚು ಚೀಟಿಗಳು ಇರುತ್ತವೆಯೋ, ಅವರು ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಿದ್ದರು.

Share This Video


Download

  
Report form
RELATED VIDEOS