Social Media is abuzz with rumors that Tamil actor Simbu has secretly married Oviya. A picture of them with garlands around their necks has paved the way for the speculations.
ಬಹುಭಾಷಾ ನಟಿ ಓವಿಯಾ, ತಮಿಳು ಸ್ಟಾರ್ ನಟನ ಜೊತೆ ಗುಟ್ಟಾಗಿ ಮದುವೆ ಆಗಿದ್ದಾರೆ ಎಂಬ ಸುದ್ದಿ ಈಗ ದಕ್ಷಿಣ ಭಾರತದಲ್ಲಿ ಸದ್ದು ಮಾಡುತ್ತಿದೆ. ಅರೇ, ಈ ಓವಿಯಾ ಯಾರು ಎಂಬ ಕನ್ ಫ್ಯೂಶನ್ ನಿಮ್ಮನ್ನ ಕಾಡುತ್ತಿದ್ದರೇ, ನೀವು ಸ್ವಲ್ಪ ಫ್ಲಾಶ್ ಬ್ಯಾಕ್ ಗೆ ಹೋಗ್ಬೇಕು.2011 ರಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿದ್ದ 'ಕಿರಾತಕ' ಚಿತ್ರವನ್ನ ನೋಡಿದವರಿಗೆ ಈ ಓವಿಯಾ ನೆನಪಾಗ್ತಾರೆ. ಮಂಡ್ಯ ಹೈದ ಯಶ್ ಗೆ 'ಕಿರಾತಕ' ಚಿತ್ರದಲ್ಲಿ ನಾಯಕಿಯಾಗಿದ್ದ ಹುಡುಗಿಯೇ ಓವಿಯಾ. ಓವಿಯಾ ಕನ್ನಡದಲ್ಲಿ ಮಾಡಿದ್ದು ಎರಡೇ ಸಿನಿಮಾ. ಆದ್ರೆ, ತಮಿಳಿನಲ್ಲಿ ಹೆಚ್ಚು ಗುರುತಿಸಿಕೊಂಡ ಈಕೆ, ತಮಿಳಿನ ಸ್ಟಾರ್ ನಟನನ್ನ ವಿವಾಹವಾಗಿದ್ದಾರೆ ಎನ್ನಲಾಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಗಿದ್ರೆ, ಓವಿಯಾ ಮದುವೆ ನಿಜಾನ? ಕಿರಾತಕನ ಹುಡುಗಿಯನ್ನ ಮದುವೆ ಆಗಿರುವ ಆ ಸ್ಟಾರ್ ನಟ ಯಾರು?