Prime minister Narendra Modi, a year ago, tells about One Nation One Election in one of his speeches. This is the topic of debate now. According to readers what are the merits and demerits of this concept
'ಒಂದು ದೇಶ, ಒಂದು ಚುನಾವಣೆ' ಬಗ್ಗೆ 2017 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಒಂದು ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಅದಾದ ನಂತರ ಈ ವಿಷಯ ಸಾಕಷ್ಟು ಬಾರಿ ಚರ್ಚೆಗೂ ಬಂತು. ಒಂದು ದೇಶ, ಒಂದು ಚುನಾವಣೆ ಭಾರತದಂಥ ದೇಶಗಳಿಗೆ ಹೇಳಿಮಾಡಿಸಿದ್ದಲ್ಲ ಎಂದು ಕೆಲವರು ಮೂಗು ಮುರಿದರು. ಆದರೆ ಬಿಜೆಪಿಯನ್ನು ವಿರೋಧಿಸುವ ಸಮಾಜವಾದಿ ಪಕ್ಷದ ನಾಯಕರೇ ಈ ಪದ್ಧತಿಯನ್ನು ಬೆಂಬಲಿಸುವುದಾಗಿ ಹೇಳಿದರು. ಈ ಮೂಲಕ ಒಂದು ದೇಶ, ಒಂದು ಚುನಾವಣೆಯ ಪರಿಕಲ್ಪನೆಯನ್ನು ಜಾರಿಗೊಳಿಸಬೇಕೇ, ಬೇಡವೇ ಎಂಬ ಚರ್ಚೆ ಮತ್ತಷ್ಟು ಸುದ್ದಿಯಾಯಿತು.