ರೈತ ಮಹಿಳೆಯ ಬಗ್ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಯಿಂದ ಇಡೀ ರಾಜ್ಯದ ರೈತರು ದೊಡ್ಡ ಮಟ್ಟದ ಹೋರಾಟ ಮಾಡಿದ್ದರು. ಸಿಎಂ ಅವರ ಹೇಳಿಕೆಗೆ ರೈತರು ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಖಂಡನೆ ವ್ಯಕ್ತಪಡಿಸಿದ್ದರು. ನಂತರ ಇದರ ಬಗ್ಗೆ ಸ್ಪಷ್ಟನೆ ನೀಡಿದ್ದ ಕುಮಾರಸ್ವಾಮಿ ''ನಾನು ಆ ರೈತ ಮಹಿಳೆಯ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ, ನಾನು ಮಾತನಾಡಿದ ವಿಡಿಯೋ ಮತ್ತೆ ನೋಡಿ, ನಾನು ಆಕೆಗೆ 'ತಾಯಿ' ಎಂದು ಕರೆದಿದ್ದೇನೆ'' ಎಂದು ಹೇಳಿದರು.
Chief minister hd kumaraswamy son nikhil kumar has clarified about his father controversial statement.