Will Yash, Kannada actor stardom will remain after working with director Puri Jagannadh. Yash will play lead role in director Puri Jagannadh's 'Jana Gana Mana' movie.
'ಕೆಜಿಎಫ್' ಎನ್ನುವ ಮಹಾ ಸಿನಿಮಾ ಯಶ್ ಸ್ಟಾರ್ ಗಿರಿಯನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ. ಸ್ಯಾಂಡಲ್ ವುಡ್ ಸ್ಟಾರ್ ಆಗಿದ್ದ ಯಶ್ ಈ ಸಿನಿಮಾದ ನಂತರ ನ್ಯಾಷನಲ್ ಸ್ಟಾರ್ ಆಗಿರುವುದು ಗೊತ್ತಿರೋ ವಿಷಯ. ಈಗ ಯಶ್ ಮೇಲೆ ನಿರ್ದೇಶಕ ಪೂರಿ ಜಗನ್ನಾಥ್ ಕಣ್ಣು ಬಿದ್ದಿದೆ. ಟಾಲಿವುಡ್ ಸ್ಟಾರ್ ಡೈರೆಕ್ಟರ್ ಅಣ್ತಮ್ಮನಿಗೆ ಒಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. ಮುಂದಿನ ಜನವರಿಗೆ ಈ ಸಿನಿಮಾ ಸೆಟ್ಟೇರುವ ಎಲ್ಲ ಸಾಧ್ಯತೆಗಳು ಇವೆ. ಆದರೆ, ಪೂರಿ ಜಗನ್ನಾಥ್ ಹಾಗೂ ಯಶ್ ಅವರ ಈ ಸಿನಿಮಾದ ಮೇಲೆ ಸಾಕಷ್ಟು ಅನುಮಾನಗಳು ಮೂಡಿದೆ.