ಹೋಂಡಾ ಮೋಟರ್ ಸೈಕಲ್ಸ್ ಹಾಗೂ ಸ್ಕೂಟರ್ಸ್ ಇಂಡಿಯಾ, ಭಾರತದಲ್ಲಿ ಗ್ರಾಜಿಯಾ 125 ಬಿಎಸ್ 6 ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಹೊಸ ಹೋಂಡಾ ಗ್ರಾಜಿಯಾ 125 ಬಿಎಸ್ 6 ಸ್ಕೂಟರಿನ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ 73,336 ರೂಪಾಯಿಗಳಾಗಿದೆ.
ಈ ಸ್ಕೂಟರ್ ಅನ್ನು ಸ್ಟ್ಯಾಂಡರ್ಡ್ ಹಾಗೂ ಡೀಲಕ್ಸ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹೊಸ ಹೋಂಡಾ ಗ್ರಾಜಿಯಾ 125 ಬಿಎಸ್ 6 ಸ್ಕೂಟರ್‌ನ ಬುಕ್ಕಿಂಗ್‌ಗಳನ್ನು ದೇಶದ್ಯಾಂತವಿರುವ ಎಲ್ಲಾ ಶೋರೂಂಗಳಲ್ಲಿ ಆರಂಭಿಸಲಾಗಿದೆ. ಈ ಸ್ಕೂಟರಿನ ವಿತರಣೆಯನ್ನು ತಕ್ಷಣವೇ ಆರಂಭಿಸಲಾಗುವುದು.
ಹೊಸ ಹೋಂಡಾ ಗ್ರಾಜಿಯಾ 125 ಬಿಎಸ್ 6 ಸ್ಕೂಟರಿನಲ್ಲಿ ಹಲವಾರು ಅಪ್‌ಡೇಟ್‌ಗಳನ್ನು ಮಾಡಲಾಗಿದೆ.