ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಕರ್ವ್ ಎಲೆಕ್ಟ್ರಿಕ್ ಕೂಪೆ ಕಾನ್ಸೆಪ್ಟ್ ಎಸ್‌ಯುವಿ ಮಾದರಿಯನ್ನು ಬಹಿರಂಗಪಡಿಸಿದ್ದು, ಹೊಸ ಕರ್ವ್ ಕಾನ್ಸೆಪ್ಟ್ ಮಾದರಿಯು 2024ರಲ್ಲಿ ಬ್ರ್ಯಾಂಡ್‌ನ ಎರಡನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ. ಬಿಡುಗಡೆಗೂ ಮುನ್ನ ಕಂಪನಿಯು ಹೊಸ ಕಾರಿನ ಮಹತ್ವದ ವಿವರಗಳನ್ನು ಬಹಿರಂಗಪಡಿಸಿದ್ದು, ಪ್ರತಿ ಚಾರ್ಜ್‌ಗೆ 500ಕಿ.ಮೀ ತನಕ ಗರಿಷ್ಠ ಮೈಲೇಜ್ ನೀಡುವ ಸುಳಿವು ನೀಡಿದೆ. ಹಲವು ಸುಧಾರಿತ ತಂತ್ರಜ್ಞಾನ ಹೊಂದಿರುವ ಕರ್ವ್ ಕಾನ್ಸೆಪ್ಟ್ ಕಾರು ಇವಿ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದ್ದು, ಹೊಸ ಕಾರಿನ ಕುರಿತಂತೆ ಮತ್ತಷ್ಟು ಮಾಹಿತಿಯನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
#TataCurvv #ElectricSUV #Coupe #DifferentByDesign #Walkaround