ದಸರಾ ದೀಪಾಲಂಕಾರದಿಂದಾಗಿ ಜಗಮಗಿಸಿದ ಅರಮನೆ ನಗರಿ: ವಿಡಿಯೋ

ETVBHARAT 2025-09-28

Views 52

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ. ಇದಕ್ಕೆ ಮೆರುಗು ನೀಡುವುದು ಅರಮನೆಯ ಶಾಶ್ವತ ದೀಪಾಲಂಕಾರ ಹಾಗೂ ನಗರದ ದಸರಾ ವಿದ್ಯುತ್ ದೀಪಾಲಂಕಾರ. ಈ ಬಾರಿ ಅರಮನೆ ನಗರಿಯಲ್ಲಿ ಮಾಡಿರುವ ದೀಪಾಲಂಕಾರ ಜಗಮಗಿಸುತ್ತಿದೆ. ಇದನ್ನು ನೋಡಲು ಪ್ರತಿನಿತ್ಯ ಜನಸಾಗರವೇ ಇಲ್ಲಿಗೆ ಹರಿದು ಬರುತ್ತಿದೆ.

ಅರಮನೆಯ ಮುಂಭಾಗ, ಅರಮನೆ ಸುತ್ತ, ಕೆ.ಆರ್​.ವೃತ್ತ, ದೇವರಾಜ ಅರಸು ರಸ್ತೆ, ರಾಮಸ್ವಾಮಿ ವೃತ್ತ, ಜಂಬೂಸವಾರಿ ಸಾಗುವ ಮಾರ್ಗಗಳು ಸೇರಿದಂತೆ ನಗರದ 135 ಕಿ.ಮೀ ವ್ಯಾಪ್ತಿಯ ರಸ್ತೆಗಳಲ್ಲಿ ಹಾಗೂ 118 ವೃತ್ತಗಳಲ್ಲಿ ವೈಭವದ ವರ್ಣರಂಜಿತ ದೀಪಾಲಂಕಾರ ಮಾಡಲಾಗಿದೆ. ಇವುಗಳ ಜೊತೆಗೆ ಪ್ರಮುಖ ರಸ್ತೆಗಳಲ್ಲಿ ಹಾಗೂ ವೃತ್ತಗಳಲ್ಲಿ ಆಕರ್ಷಕ ಪ್ರತಿಕೃತಿಗಳನ್ನು ಹಾಕಲಾಗಿದೆ. ಎಲ್ಇಡಿ ಬಲ್ಬ್‌ಗಳನ್ನೂ ದೀಪಾಲಂಕಾರದಲ್ಲಿ ಬಳಸಲಾಗಿದೆ.

ದಸರಾ ದೀಪಾಲಂಕಾರದಿಂದಾಗಿ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಮತ್ತಷ್ಟು ವೈಭವದಿಂದ ಕಂಗೊಳಿಸುತ್ತಿದೆ. ಅರಮನೆಯ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.  

ಏರ್ ಶೋ: ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಜಿಲ್ಲಾಡಳಿತ ಮತ್ತು‌ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಇಂದು ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಭಾರತೀಯ ವಾಯುಪಡೆ (ಐ.ಎ.ಎಫ್) ಆಕರ್ಷಕ ಏರ್ ಶೋ ನಡೆಸಿತು.

ಇದನ್ನೂ ಓದಿ: ಮರದ ಅಂಬಾರಿ ಹೊರುವ ತಾಲೀಮು ಮುಕ್ತಾಯ; ಗಜಪಡೆ ನೋಡಲು ಜನಸಾಗರ

Share This Video


Download

  
Report form
RELATED VIDEOS