ವಿಶ್ವವಿಖ್ಯಾತ ಜಂಬೂ ಸವಾರಿ ವೇಳೆ ಗಮನ ಸೆಳೆಯುವ ಸ್ತಬ್ಧ ಚಿತ್ರಗಳಿವು: VIDEO

ETVBHARAT 2025-10-02

Views 18

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ಮೈಸೂರಲ್ಲಿ ಇಂದು ಸಂಜೆ 4.42ರಿಂದ 5.06 ವರೆಗಿನ ಶುಭ ಮುಹೂರ್ತದಲ್ಲಿ ಜಂಬೂ ಸವಾರಿಗೆ ಚಾಲನೆ ಸಿಗಲಿದೆ. ಅಭಿಮನ್ಯು ಆನೆ ಅರಮನೆ ಬಳಿಯಿಂದ ಚಿನ್ನದ ಅಂಬಾರಿಯನ್ನು ಹೊತ್ತು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತ, ಬಂಬೂ ಬಜಾರ್ ಮೂಲಕ ಬನ್ನಿಮಂಟಪದವರೆಗೆ ಸುಮಾರು 5 ಕಿ.ಮೀ. ದೂರ ಸಾಗಲಿದೆ. ಜಂಬೂ ಸವಾರಿಗೆ ಆಕರ್ಷಕ ಸ್ತಬ್ಧ ಚಿತ್ರಗಳು ಹಾಗೂ ಕಲಾತಂಡಗಳು ಸಾಥ್​ ನೀಡುವ ಮೂಲಕ ಮೆರವಣಿಗೆಯನ್ನು ಮತ್ತಷ್ಟು ಮೆರುಗುಗೊಳಿಸಲಿವೆ.

ಜಗತ್ಪ್ರಸಿದ್ಧ ಜಂಬೂ ಸವಾರಿ ಕಣ್ತುಂಬಿಕೊಳ್ಳಲು ಸಹಸ್ರ ಸಂಖ್ಯೆಯಲ್ಲಿ ಜನರು ಕಾಯುತ್ತಿದ್ದಾರೆ. ಇನ್ನು ಜಂಬೂ ಸವಾರಿ ಮೆರವಣಿಗೆಯಲ್ಲಿ ವಿಶೇಷ ಟ್ಯಾಬ್ಲ್ಯೂಗಳು ಕಣ್ಮನ ಸೆಳೆಯಲು ಸಜ್ಜಾಗಿವೆ. 31 ಜಿಲ್ಲೆಗಳ ಸ್ತಬ್ಧಚಿತ್ರಗಳು ತಮ್ಮ ಜಿಲ್ಲೆಯ ಮಹತ್ವ, ಕಲೆ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸಲಿವೆ. ಈ ಬಾರಿ 58 ಟ್ಯಾಬ್ಲ್ಯೂಗಳು ಮೆರವಣಿಗೆಯಲ್ಲಿ ಸಾಗಲಿದ್ದು, ಈಗಾಗಲೇ ಅರಮನೆ ಆವರಣಕ್ಕೆ ಪ್ರವೇಶಿಸಿವೆ.

ಇದನ್ನೂ ಓದಿ: ದಸರಾ ಜಂಬೂಸವಾರಿ: ಭೀಮನ ತೂಕ 440 ಕೆ.ಜಿ ಹೆಚ್ಚಳ, ಉಳಿದ ಆನೆಗಳ ತೂಕ ಹೀಗಿದೆ

ಇದನ್ನೂ ಓದಿ: ಮೈಸೂರು ದಸರಾ: ರೂಪ, ಹೇಮಾವತಿ, ಶ್ರೀಕಂಠ ಆನೆಗಳಿಗೆ ಒಲಿದ ಅದೃಷ್ಟ!

Share This Video


Download

  
Report form
RELATED VIDEOS