'Drama Juniors season-2' has reached to Grand Finale. Drama Juniors which is Zee Kannada's popular TV Programme. Now lets go back to finale contestant Vamshi's Life Journey. Watch Video.
ಪಟ-ಪಟಾಂತ ಅರಳು ಹುರಿದಂತೆ ಹೊಡೆಯುವ ಡೈಲಾಗ್, ನಿರರ್ಗಳವಾದ ಮಾತು, ಮಾತಿಗೆ ತಕ್ಕಂತೆ ಬಾಡಿ ಲಾಂಗ್ವೆಜ್, ಹಾಡು, ನೃತ್ಯದ ಮೂಲಕ ಎಲ್ಲರ ಮನ ಗೆದ್ದಿರುವಾಕೆ ಈ ಪುಟ್ಟ ಪೋರಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡ್ರಾಮಾ ಜ್ಯೂನಿಯರ್ಸ್' ಸೀಸನ್-2ರಲ್ಲಿ ಮಿಂಚುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭೆ ವಂಶಿ ರತ್ನಕುಮಾರ್.ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆದ ಆಡಿಷನ್ ನಲ್ಲಿ ಆಯ್ಕೆಯಾದ ವಂಶಿ, ತದನಂತರ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಬೆಂಗಳೂರಿನಲ್ಲಿ ನಡೆದ ಆಡಿಷನ್ ನಲ್ಲಿ ಇಡೀ ಕರ್ನಾಟಕದ 30 ಸ್ಪರ್ಧಿಗಳಲ್ಲಿ 12 ಜನ ಸ್ಪರ್ಧಿಗಳು ಆಯ್ಕೆಯಾಗಿದ್ದರು. ಅದರಲ್ಲಿ ವಂಶಿ ಕೂಡ ಒಬ್ಬರಾದರು.ಈಗ 'ಡ್ರಾಮಾ ಜೂನಿಯರ್ಸ್' ಫಿನಾಲೆ ಹಂತಕ್ಕೆ ತಲುಪಿದ್ದು, ಗೆಲ್ಲುವ ಭರವಸೆ ಮೂಡಿಸಿದ್ದಾರೆ. 'ಜೂನಿಯರ್ ಲಕ್ಷ್ಮಿ' ಎಂದೇ ಕರೆಸಿಕೊಳ್ಳುತ್ತಿರುವ ವಂಶಿಯ ಬಗ್ಗೆ ಸಂಪೂರ್ಣವಾದ ಮಾಹಿತಿ ಮುಂದಿದೆ.ಯಾವುದೇ ಗುರು ಇಲ್ಲದೆ 'ಡ್ರಾಮಾ ಜ್ಯೂನಿಯರ್ಸ್' ವೇದಿಕೆಗೆ ಕಾಲಿಟ್ಟ ವಂಶಿ