Kannada actress Rashmika Mandanna has been offered to make a grand debut in Bollywood. She got an offer from star director Sanjay Leela Bhansali's mega project.
ಕಿರಿಕ್ ಪಾರ್ಟಿ' ಸೂಪರ್ ಹಿಟ್ ಸಿನಿಮಾ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ರಶ್ಮಿಕಾ ಈಗ ಸೌತ್ ಸಿನಿ ಇಂಡಸ್ಟ್ರಿಯ ಸ್ಟಾರ್ ನಟಿಯಾಗಿ ಮೆರೆಯುತ್ತಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಬ್ಯುಸಿ ಇರುವ ಕನ್ನಡದ ಸಾನ್ವಿ ಇತ್ತೀಚಿಗಷ್ಟೆ ತಮಿಳು ಚಿತ್ರರಂಗಕ್ಕೂ ಕಾಲಿಟ್ಟದ್ದಾರೆ. ತೆಲುಗು, ತಮಿಳು, ಕನ್ನಡ ಚಿತ್ರಗಳಲ್ಲಿ ಬ್ಯುಸಿ ಇರುವ ರಶ್ಮಿಕಾ ಈಗ ಬಾಲಿವುಡ್ ನತ್ತ ಪಯಣ ಬೆಳೆಸಿದ್ದಾರೆ ಎನ್ನುವ ಮಾತುಗಳು ಹೇಳಿ ಬರುತ್ತಿದೆ.